ಲಾಗಿನ್
CenturyTV
ತಾಜಾ ಸುದ್ದಿ
ಬಂಧನದ ಬಳಿಕ ಪರಾರಿ; ಮತ್ತೆ ಸಿಕ್ಕಿಬಿದ್ದ ಆರೋಪಿ ಕೋಳಿ ಫಾರಂಗಳಿಗೆ ವಿದ್ಯುತ್ ಸಂಪರ್ಕ: ಕಂದಾಯ ಇಲಾಖೆಯಿಂದಲೇ ‘NOC’ ನೀಡಲು ಡಿಸಿಎಂಗೆ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಮನವಿ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಗಾಯಗೊಂಡ ಹುಲಿ ಓಡಾಟ ಕಾಲೇಜು ಶುಲ್ಕ ಕಟ್ಟಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆ ಮನೆಯ ಮುಂದಿನ ನೀರಿನ ಸಂಪ್‌ಗೆ ಬಿದ್ದು, 2 ವರ್ಷದ ಮಗು ಸಾವು ಬಂಧನದ ಬಳಿಕ ಪರಾರಿ; ಮತ್ತೆ ಸಿಕ್ಕಿಬಿದ್ದ ಆರೋಪಿ ಕೋಳಿ ಫಾರಂಗಳಿಗೆ ವಿದ್ಯುತ್ ಸಂಪರ್ಕ: ಕಂದಾಯ ಇಲಾಖೆಯಿಂದಲೇ ‘NOC’ ನೀಡಲು ಡಿಸಿಎಂಗೆ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಮನವಿ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಗಾಯಗೊಂಡ ಹುಲಿ ಓಡಾಟ ಕಾಲೇಜು ಶುಲ್ಕ ಕಟ್ಟಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆ ಮನೆಯ ಮುಂದಿನ ನೀರಿನ ಸಂಪ್‌ಗೆ ಬಿದ್ದು, 2 ವರ್ಷದ ಮಗು ಸಾವು
ರಾಜ್ಯ

ಮಂಡಿಗೆ ಹಾಕಿದ ಮಾವಿನ ಹಣ್ಣು ಸವಿಯಿರಿ ಬೀದಿ ಬದಿ ವ್ಯಾಪಾರಿ ಓಬಣ್ಣ ಕರೆ

sh
ವರದಿ: shashikala ಸ್ಥಳ: ವಿಶೇಷ ಪ್ರತಿನಿಧಿ
ಓದುವ ಸಮಯ: 0 ನಿಮಿಷ ಪ್ರಕಟಣೆ: Jun 02, 2026 424
ಹಂಚಿಕೊಳ್ಳಿ
ಮಂಡಿಗೆ ಹಾಕಿದ ಮಾವಿನ ಹಣ್ಣು ಸವಿಯಿರಿ ಬೀದಿ ಬದಿ ವ್ಯಾಪಾರಿ ಓಬಣ್ಣ ಕರೆ
ಅಕ್ಷರದ ಗಾತ್ರ:

ವಿಜಯನಗರ ಜಿಲ್ಲೆ ಕೂಡ್ಲಿಗಿ : ಹಣ್ಣುಗಳ ರಾಜ ಮಾವಿನಹಣ್ಣು , ನೈಸರ್ಗಿಕವಾಗಿ ಮರದಲ್ಲಿಯೇ ಪೂರಾ ಮಾಗಿದ ಮಾವಿನ ಹಣ್ಣು ಸವಿಯಲು ಬಲು ಮಧುರ ಹಾಗೂ ರುಚಿಕರವಾಗಿರುತ್ತದೆ. ಆದರೆ ಮಾರುಕಟ್ಟೆಯಲ್ಲಿ ಸ‍ಾಕಷ್ಟು ಪ್ರಮ‍ಾಣದಲ್ಲಿ ಲಭ್ಯವಿರುವುದಿಲ್ಲ , ಈಗೆಲ್ಲಾ ಮಾರುಕಟ್ಟೆಯಲ್ಲಿ ರಾಸಾಯನಿಕ ಪೌಡರ್ ಅಥವಾ ದ್ರವ ಸಿಂಪರಣೆಯಿಂದಾಗಿ ಹಣ್ಣಾಗಿರುವ ಮಾವು ಲಭ್ಯವಿದೆ.
ರೈತಾಪಿ ವರ್ಗದ ಮಾವು ಸಗಟು ವ್ಯಾಪಾರದವರು , ತಾವೇ ತೋಟಕ್ಕೆ ತೆರಳಿ ಮಾವು ತಂದು ಮಂಡಿಗೆ ಹಾಕಿ ಹಣ್ಣು ಮಾಡುತ್ತಾರೆ. ಅದಕ್ಕೆ ಯಾವುದೇ ರಾಸ‍ಾಯನಿಕ ಪೌಡರ್ ಅಥವಾ ದ್ರವ ಸಿಂಪರಣೆ ಮಾಡುವುದಿಲ್ಲ , ಬದಲಿಗೆ ಬತ್ತದ ಹುಲ್ಲು ಬಾದೆ ಹುಲ್ಲು ಹೊದಿಸಿ ಕಾವು ವಾತಾವಣರಣ ನಿರ್ಮಿಸಿ. ಮ‍ಾವನ್ನು ಸಹಜವಾಗಿ ನೈಸರ್ಗಿಕ ವಾಗಿ ಹಣ್ಣ‍ಾಗುವಂತೆ ಹಣ್ಣು ಮಾಡಲಾಗುತ್ತೆ ,

ಈ ಹಣ್ಣು ಸಹಜ ಮಧುರವಾಗಿರುತ್ತದೆ ತುಂಬಾ ಸ್ವಾಧಭರಿತವಾಗಿರುತ್ತದೆ ಪೌಷ್ಠಿಕಾಂಶಗಳು ಹೇರಳವಾಗಿರುತ್ತವೆ. ಆ‍ದರೆ ಕೆಲವರು ಸಗಟು ವ್ಯಾಪಾರಿಗಳು ತೋಟದಿಂದ ತಂದ ಮಾವಿನ ಹಣ್ಣನ್ನು , ಗೋದ‍ಾಮಿನಲ್ಲಿ ಗುಪ್ಪೆ ಹಾಕುತ್ತಾರೆ. ಹಣ್ಣಿಗೆ ರಾಸಾಯನಿಕ ಪೌಡರ್ ಹಾಗೂ ರಾಸಾಯನಿಕ ದ್ರವ ಸಿಂಪರಣೆ ಮಾಡುತ್ತಾರೆ , ಹಾಗೂ ಕೆಲವರು ವಿದ್ಯುತ್ ಬಲ್ಪಗಳಿಂದ ನಿಯಮಿತ ಶಾಕ ನೀಡಿ ಹಣ್ಣು ಮಾಡುತ್ತಾರೆ. ಈ ತರಹದ ಹಣ್ಣು ತಿಂದರೆ , ಅನಾರೋಗ್ಯಕ್ಕೀಡಾಗಬೇಕಾಗುತ್ತದೆ. ಮತ್ತು ಮಾವಿನ ಹಣ್ಣಿನಲ್ಲಿ ರಾಸಾಯನಿಕ ಬೆರೆತು , ಹಣ್ಣಿನ ನೈಸರ್ಗಿಕ ಸ್ವಾದ ಶಕ್ತಿ ಪೋಷಕಾಂಶಗಳು ನಾಶವಾಗಿರಯತ್ತವೆ. ಇಂತಹ ಹಣ್ಣುಗಳ ಸೇವನೆ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರಬಹುದ‍ಾಗಿದೆ , ರಾಸಾಯನಿಕ ಸಿಂಪರಣೆಯಿಂದ ಮಾಗಿದ ಮಾವಿನ ಹಣ್ಣು ಸಂಪೂರ್ಣ ಸತ್ವ ಕಳೆದುಕೊಂಡಿರುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯೆಕ್ತಪಡಿಸಿದ್ದಾರೆ.


ಪ್ರತಿ ವರ್ಷ ಎಪ್ರಿಲ್ ನಿಂದ ಜುಲೈ ರವರೆಗೆ , ಮಾವು ಮಾರುಕಟ್ಟೆಯಲ್ಲಿ ತನ್ನ ದರ್ಭಾರ್ ನಡೆಸುತ್ತದೆ. ಈ ಸಂದರ್ಭದಲ್ಲಿ ಹತ್ತಾರು ಬಗೆಯ ಮಾವುಗಳು , ಪರಸ್ಪರ ಸ್ಪರ್ಧಾ ಮನೋಭಾವದೊಂದಿಗೆ ಮಾರುಕಟ್ಟೆಗೆ ಲಗ್ಗೆ ಹಾಕುತ್ತವೆ. ಅಂತಯೇ ಕೂಡ್ಲಿಗಿಯ ಮಾರುಕಟ್ಟೆಯಲ್ಲಿ ಸದ್ಯ ಮಾವಿನ ಧರ್ಭಾರ್ ಬಲು ಜೋರಿದೆ , ಪಟ್ಟಣ ಪ್ರಮುಖ ಬೀದಿ ಬದಿಗಳಲ್ಲಿನ ಅಂಗಡಿಗಳಲ್ಲಿ. ಮುಖ್ಯ ರಸ್ತೆಗಳ ಬದಿಯ ಪಾದಾಚಾರಿ ರಸ್ತೆಗಳ ಬದಿಯಲ್ಲಿ , ಮಾವಿನ ಹಣ್ಣುಗಳ ಜಾತ್ರೆನೆ ನಡೆದಿರುತ್ತೆ. ಮಹನೀಯ ಜನರೆ ಮಾವಿನಹಣ್ಣು ನೈಸರ್ಗಿಕವಾಗಿ ಮಾಗಿದ್ದರೆ ಮ‍ಾತ್ರ ಕೊಂಡು ಕೊಳ್ಳಿ , ಅದು ಮಂಡಿಗೆ ಹಾಕಿದ ಹಣ್ಣಾಗಿರಬೇಕು. ಅಂತಹ ಮಾವಿನ ಹಣ್ಣು ತಿಂದರೆ ಆರೋಗ್ಯಕ್ಕೆ ಪೂರಕ , ರಾಸಾಯನಿಕ ಪೌಡರ್ ದ್ರವ ಸಿಂಪರಣೆಯಿಂದ ಮಾಗಿರುವ ಹಣ್ಣು ಆರೋಗ್ಯಕ್ಕೆ ಮಾರಕವಾಗಲಿದೆ. ಕಾರಣ ಯಾವುದೇ ರಾಸ‍ಾಯನಿಕ ಬಳಸದೇ , ತಾವು ನೈಸರ್ಗಿಕ ವಿಧ‍ನಗಳನ್ನು ಅನುಸರಿಸಿ ಮಾವಿನ ಮಂಡಿ ನಿರ್ವಹಿಸುತ್ತಿದ್ದು. ಅತಿ ಹೆಚ್ಚಿನ ಪ್ರಮಾಣದಲ್ಲಿ ಉತ್ಕೃಷ್ಟವಾದ ಹಣ್ಣು ಗಳು ಬೇಕಿದ್ದಲ್ಲಿ. ಬೃಹತ್ ಕಾರ್ಯಕ್ರಮಗಳಿಗೆ ಅತಿ ದೊಡ್ಡ ಉತ್ಸವ ಆಚರಣೆ ಕಾರ್ಯಕ್ರಮಗಳಿಗೆ ಮಾವಿನ ಗಣ್ಣು ಅಗತ್ತವಿದ್ದಲ್ಲಿ , ತಮ್ಮನ್ನು ದೂರವಾಣಿ ಮೂಲಕಸಂಪರ್ಕಿಸಿ ಕಾಯ್ದಿರಿಸಬಹುದಾಗಿದೆ.

ಮತ್ತು ಪಟ್ಟಣದ ಮದಕರಿ ವೃತ್ತದ ಬಳಿ ಬೀದಿ ಬದಿಯಲ್ಲಿ , ತಾವು ದಬ್ಬೋ ಗಾಡಿ ಅಂಗಡಿಯಲ್ಲಿ ಹಣ್ಣು ಮಾರಾಟ ಮಾಡುತ್ತಿದ್ದು. ಉಪ್ಪಿನ ಕಾಯಿಗೆ , ಅಥವಾ ಸೇವಿಸಲು ಅತಿ ಹೆಚ್ಚಿನ ಪ್ರಮಾಣ ದಲ್ಲಿ ಹಣ್ಣು ಬೇಕಾರಲ್ಲಿ. ಹಣ್ಣನ ಮಂಡಿ ಪಟ್ಟಣದ 13 ನೇ ವಾರ್ಡಿನ ಗುಪ್ಪಾಲರ ಓಣಿಯಲ್ಲಿ ಹಣ್ಣಿನ ಮಂಡಿ ಇದ್ದು ಖುದ್ಧು ಬೇಟಿ ನೀಡಿ ವ್ಯಾಪಾರ ಮಾಡಿ ಹಣ್ಣು ಕರೀದಿಸಬಹುದೆಂದು.ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಒಬಳಪ್ಪ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಹಬ್ಬ ಹರಿದಿನಗಳು ಆಚರಣೆಗಳು ವಿಶೇಷ ಕಾರ್ಯಕ್ರಮ ಉತ್ಸವಗಳಲ್ಲಿ , ಬೀದಿ ಬದಿ ವ್ಯಾಪಾರಸ್ಥರಲ್ಲಿ ವ್ಯಾಪಾರ ಮಾಡಬೇಕೆಂದು ಓಬಳಪ್ಪ ಸಾರ್ವಜನಿಕರಲ್ಲಿ ನಾಗರೀಕರಲ್ಲಿ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಬೀದಿಬದಿ ವ್ಯಾಪಾರಿಗಳ ಸಂಘದ ಜಿಲ್ಲಾಧ್ಯಕ್ಷ ಭಾಷ , ಗೌರಮ್ಮ ಮಹಂತೇಶ ಶಿಂಧೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಸುದ್ದಿ ಹಂಚಿಕೊಳ್ಳಿ:
ಪ್ರಾಯೋಜಿತ ಜಾಹೀರಾತು

ವೆಬ್‌ಸೈಟ್ ಅಭಿವೃದ್ಧಿ ಸೇವೆಗಳು - R Techub

ಸುದ್ದಿ ಪೋರ್ಟಲ್, ಇ-ಕಾಮರ್ಸ್ ಮತ್ತು ಬಿಸಿನೆಸ್ ವೆಬ್‌ಸೈಟ್‌ಗಳ ವಿನ್ಯಾಸಕ್ಕಾಗಿ ಇಂದೇ ಸಂಪರ್ಕಿಸಿ.

ಸಂಪರ್ಕಿಸಿ: 8095556363
footer ad
ಚಾಟ್ ಮಾಡಿ