ಲಾಗಿನ್
CenturyTV
ತಾಜಾ ಸುದ್ದಿ
ಬಂಧನದ ಬಳಿಕ ಪರಾರಿ; ಮತ್ತೆ ಸಿಕ್ಕಿಬಿದ್ದ ಆರೋಪಿ ಕೋಳಿ ಫಾರಂಗಳಿಗೆ ವಿದ್ಯುತ್ ಸಂಪರ್ಕ: ಕಂದಾಯ ಇಲಾಖೆಯಿಂದಲೇ ‘NOC’ ನೀಡಲು ಡಿಸಿಎಂಗೆ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಮನವಿ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಗಾಯಗೊಂಡ ಹುಲಿ ಓಡಾಟ ಕಾಲೇಜು ಶುಲ್ಕ ಕಟ್ಟಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆ ಮನೆಯ ಮುಂದಿನ ನೀರಿನ ಸಂಪ್‌ಗೆ ಬಿದ್ದು, 2 ವರ್ಷದ ಮಗು ಸಾವು ಬಂಧನದ ಬಳಿಕ ಪರಾರಿ; ಮತ್ತೆ ಸಿಕ್ಕಿಬಿದ್ದ ಆರೋಪಿ ಕೋಳಿ ಫಾರಂಗಳಿಗೆ ವಿದ್ಯುತ್ ಸಂಪರ್ಕ: ಕಂದಾಯ ಇಲಾಖೆಯಿಂದಲೇ ‘NOC’ ನೀಡಲು ಡಿಸಿಎಂಗೆ ಎಂಎಲ್ಸಿ ಕಿಶೋರ್ ಕುಮಾರ್ ಪುತ್ತೂರು ಮನವಿ ಮುಳ್ಳಯ್ಯನಗಿರಿ ತಪ್ಪಲಿನಲ್ಲಿ ಗಾಯಗೊಂಡ ಹುಲಿ ಓಡಾಟ ಕಾಲೇಜು ಶುಲ್ಕ ಕಟ್ಟಲಾಗದೇ ವಿದ್ಯಾರ್ಥಿನಿ ಆತ್ಮಹತ್ಯೆ ಮನೆಯ ಮುಂದಿನ ನೀರಿನ ಸಂಪ್‌ಗೆ ಬಿದ್ದು, 2 ವರ್ಷದ ಮಗು ಸಾವು
ಬೆಂಗಳೂರು

ಲೋಕ ಕಲ್ಯಾಣಾರ್ಥ – ” ಹೋಳಿಗೆಮ್ಮ ಹಬ್ಬ ” ಆಚರಣೆ

sh
ವರದಿ: shashikala ಸ್ಥಳ: ವಿಶೇಷ ಪ್ರತಿನಿಧಿ
ಓದುವ ಸಮಯ: 0 ನಿಮಿಷ ಪ್ರಕಟಣೆ: Jun 04, 2026 444
ಹಂಚಿಕೊಳ್ಳಿ
ಲೋಕ ಕಲ್ಯಾಣಾರ್ಥ – ” ಹೋಳಿಗೆಮ್ಮ ಹಬ್ಬ ” ಆಚರಣೆ
ಅಕ್ಷರದ ಗಾತ್ರ:

ವಿಜಯನಗರ ಜಿಲ್ಲೆ ಕೂಡ್ಲಿಗಿ : ಲೋಕ ಕಲ್ಯಾಣಾರ್ಥವಾಗಿ ಪಟ್ಟಣದಲ್ಲಿ ಜೂನ್ 2 ರಂದು , ನಾಗರೀಕರ ಆಸ್ಥಿಕರ ಧಾರ್ಮಿಕ ಶ್ರದ್ಧಾವಂತ ಮಹಿಳೆಯರ ಸಹಭಾಗಿತ್ವದಲ್ಲಿ ” ಹೋಳಿಗೆಮ್ಮ ಹಬ್ಬ ” ಆಚರಣೆ ಸಂಪನ್ನಃಗೊಂಡಿತು.ಪಟ್ಟಣ ಸೇರಿದಂತೆ ಕ್ಷೇತ್ರದಲ್ಲಿ ನಾಡಿನಲ್ಲಿ
ಉತ್ತಮ ಮಳೆ, ಬೆಳೆ ಮತ್ತು ಜನ ಜಾನುವಾರುಗಳ ಆರೋಗ್ಯಕ್ಕಾಗಿ ಪ್ರಾರ್ಥನೆ ಮಾಡಿ, ‘ಹೋಳಿಗೆಮ್ಮ’ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಿ ಶ್ರೀಗ್ರಾಮ ದೇವತೆ ಊರಮ್ಮಳ ಕೃಪ‍ಾಕಟಾಕ್ಷಕ್ಕೆ ಪ‍‍ಾತ್ರರಾಗಿದ್ದಾರೆ.


ಹೋಳಿಗೆಮ್ಮ ಕಳುಹಿಸಿ ಕೊಡುವುದು ಆರಣೆಯಿಂದಾಗಿಯೇ , ಯಾವುದೇ ಬರ ಭೀಕರ ರೋಗ – ಋಜಿನಗಳು, ಪ್ರಕೃತಿ ವಿಕೋಪಗಳು ಜರಗುವುದಿಲ್ಲ. ಸರ್ವರು ಸುಭೀಕ್ಷೆಯಿಂದರಿಬಹುದು ಎಂಬ ನಂಬಿಕೆ, ಲೋಕ ಕಲ್ಯಾಣಕ್ಕಾಗಿ , ಹಾಗೂ ಕಾಲ ಕಾಲಕ್ಕೆ ಸಾಕಷ್ಟು ಮಳೆ ಬೆಳೆ ಬಂದು ಸರ್ವಜೀವಿಗಳಿಗೂ ಲೇಸನ್ನುಂಟು ಮಾಡಲೆಂದು ದೆೇವತೆಯಲ್ಲಿ ಕೋರಲಾಗುತ್ತೆ.ಪ್ರತಿ ಮನೆಗೊಬ್ಬರಂತೆ ಪಟ್ಟಣದ ಎಲ್ಲ‍ಾ ಮನೆಯವರು , ಹೋಳಿಗೆಮ್ಮ ಹಬ್ಬದಲ್ಲಿ ಶ್ರದ್ಧಾ ಭಕ್ತಿಯಿಂದ ಭಾಗವಹಿಸಿದ್ದರು.


ದೇವಿಗೆ ಎಡಿಯಾಗಿ ಹೋಳಿಗೆ ಅಥವಾ ಹೂರಣ , ಹಣ್ಣಿನ ಶೀಕರಣೆ ತುಪ್ಪ ಮತ್ತು ಅನ್ನ ಸಾಂಬಾರು ಸೇರಿದಂತೆ ವಿವಿದ ಖಾಧ್ಯಗಳನ್ನು. ಅತ್ಯಂತ ಶ್ರದ್ಧಾ ಭಕ್ತಿಯಿಂದ ಮಡಿವಂತಿಕೆಯಿಂದ , ಅಡುಗೆಗಳನ್ನು ಸಿದ್ಧಪಡಿಸುತ್ತಾರೆ.ವೈಯ್ಯಕ್ತಿಕ ಸ್ವಚ್ಚತೆ ಹ‍ಾಗೂ ಮನೆ ಮನೆಯ ಸುತ್ತಲಿನ ಪರಿಸರ ಸ್ವಚ್ಚತೆಗೆ , ಈ ಸಂದರ್ಭದಲ್ಲಿ ಹೆಚ್ಚು ಒತ್ತು ನೀಡಲ‍ಾಗುತ್ತೆ.ಅಮ್ಮಳನ್ನು ಉಡಿಯಲ್ಲಿರಿಸಿಕೊಂಡು ತೆರಳಿ ಗ್ರಾಮದೇವರ ಮರದ ಕೆಳಗಡೆ , ಅಥವಾ ಜನವಸತಿ ಸ್ಥಳದಿಂದ ಕೂಗಳತೆ ದೂರದಲ್ಲಿ. ಇಲ್ಲವೇ ಊರಾಚೆಗೆ ತೆರಳಿ ಮಡಿಕೆ ರೂಪದ ದೇವಿಯನ್ನಿರಿಸಿ , ದೇವಿಗೆ ನಮಸ್ಕಾರ ಮಾಡಿ ಪ್ರಾರ್ಥನೆ ಸಲ್ಲಿಸಿ ನೈವೇದ್ಯ ಮಾಡಿ ಹಿಂತಿರುಗಿ ನೋಡದೇ ಮೌನ ವ್ರತದೊಂದಿಗೆ ಮನೆಗೆ ಬರುವುದು ವಾಡಿಕೆಯಾಗಿದೆ.


ಹೋಳಿಗೆಮ್ಮ ಹಬ್ಬವು ಕರ್ನಾಟಕದ ವಿಜಯನಗರ ಜಿಲ್ಲೆ , ಬಳ್ಳಾರಿ, ಕೊಪ್ಪಳ, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳ ಪಟ್ಟಣ ನಗರ ಪ್ರದೇಶ ಸೇರಿದಂತೆ , ಗ್ರಾಮೀಣ ಪ್ರದೇಶಗಳಲ್ಲಿ ಬಹು ಅರ್ಥಪೂರ್ಣ ಹಾಗೂ ವಿಶಿಷ್ಟವಾಗಿ ಸಾಂಪ್ರದಾಯಿಕವಾಗಿ ಆಚರಿಸಲ‍ಾಗುತ್ತದೆ.
ಊರಿನ ಸಂಕಷ್ಟಗಳನ್ನು ಕಳೆಯಲು, ಉತ್ತಮ ಮಳೆ-ಬೆಳೆಗಾಗಿ ಮತ್ತು ರೋಗ ಋಜಿನಗಳು ದೂರಾಗಲೆಂದು ಇದನ್ನು ಆಚರಿಸಲಾಗುತ್ತದೆ.
ಈ ಅಪರೂಪದ ಸನ್ನಿವೇಶದ ಮೂಲಕ ಹೊಳಿಗೆಮ್ಮ ಹಬ್ಬ , ಸಮಾಜದಲ್ಲಿ ಸೌಹಾರ್ಧತೆ ಧರ್ಮಶ್ರದ್ಧೆ ಏಕತೆಯನ್ನು ಸಾಧರಪಡಿಸಿ ಸಾಕ್ಷೀಕರಿಸುತ್ತದೆ

ಸುದ್ದಿ ಹಂಚಿಕೊಳ್ಳಿ:
ಪ್ರಾಯೋಜಿತ ಜಾಹೀರಾತು

ವೆಬ್‌ಸೈಟ್ ಅಭಿವೃದ್ಧಿ ಸೇವೆಗಳು - R Techub

ಸುದ್ದಿ ಪೋರ್ಟಲ್, ಇ-ಕಾಮರ್ಸ್ ಮತ್ತು ಬಿಸಿನೆಸ್ ವೆಬ್‌ಸೈಟ್‌ಗಳ ವಿನ್ಯಾಸಕ್ಕಾಗಿ ಇಂದೇ ಸಂಪರ್ಕಿಸಿ.

ಸಂಪರ್ಕಿಸಿ: 8095556363
footer ad
ಚಾಟ್ ಮಾಡಿ